
ಜಪಾನಿನ ಕ್ರೆಡಿಟ್ ರೇಟಿಂಗ್ ಸಂಸ್ಥೆ ಜೆಸಿಆರ್, ಭಾರತದ ಆರ್ಥಿಕ ಬೆಳವಣಿಗೆ ಮತ್ತು ಬಲಿಷ್ಠ ಹಣಕಾಸು ವ್ಯವಸ್ಥೆಯನ್ನು ಪರಿಗಣಿಸಿ 35 ವರ್ಷಗಳ ನಂತರ ರೇಟಿಂಗ್ ದರ್ಜೆಯನ್ನು ಹೆಚ್ಚಿಸಿದೆ.
ಜೆಸಿಆರ್ ಸಂಸ್ಥೆಯು ಭಾರತದ ರೇಟಿಂಗ್ ಅನ್ನು 'ಬಿಬಿಬಿ+'ನಿಂದ 'ಎ-'ಗೆ ಏರಿಸಿದ್ದು, ಇದು ದೇಶದ ಆರ್ಥಿಕ ನೀತಿಗಳ ಪರಿಣಾಮಕಾರಿತ್ವವನ್ನು ಪ್ರತಿಬಿಂಬಿಸುತ್ತದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಜೂನ್ ತ್ರೈಮಾಸಿಕದಲ್ಲಿ ನಿರೀಕ್ಷೆಗೂ ಮೀರಿದ ಜಿಡಿಪಿ ಬೆಳವಣಿಗೆ ದಾಖಲಾದ ಬೆನ್ನಲ್ಲೇ ಈ ಮಹತ್ವದ ತೀರ್ಮಾನವನ್ನು ಜಪಾನಿನ ರೇಟಿಂಗ್ ಸಂಸ್ಥೆ ಪ್ರಕಟಿಸಿದೆ.