
ಬಿಹಾರದ ಔರಂಗಾಬಾದ್ ಜಿಲ್ಲೆಯ ಭರವಾರ ಗ್ರಾಮದಲ್ಲಿ ಕಳ್ಳರು ಸಾಕುನಾಯಿಯ ಬಾಯಿಗೆ ಟೇಪ್ ಅಂಟಿಸಿ ಮನೆಯೊಳಗೆ ನುಗ್ಗಿ ದರೋಡೆ ನಡೆಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಸುಮಾರು 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು 40,000 ರೂ. ನಗದನ್ನು ಕಳ್ಳರು ದೋಚಿದ್ದು, ಮಳೆ ಮತ್ತು ಕೂಲರ್ನ ಶಬ್ದವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡಿದ್ದಾರೆ.
ಮನೆಯ ಮಾಲೀಕ ಅಲೋಕ್ ಸಿಂಗ್ ನೀಡಿದ ದೂರಿನ ಮೇರೆಗೆ ಮುಫಾಸಿಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.