
ಪ್ರಧಾನಿ ನರೇಂದ್ರ ಮೋದಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಅವರು ಭಾನುವಾರ ತಮಿಳುನಾಡಿನಲ್ಲಿ ₹13,000 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದ್ದಾರೆ.
₹4,900 ಕೋಟಿ ವೆಚ್ಚದ ಪೂನಮಲ್ಲಿ–ವಡಪಳನಿ ನಡುವಿನ ಎರಡನೇ ಹಂತದ ಚೆನ್ನೈ ಮೆಟ್ರೊ ರೈಲು ಯೋಜನೆಯನ್ನು ಮೋದಿ ಉದ್ಘಾಟಿಸಿ, ವಿಜಯ್ ಅವರೊಂದಿಗೆ ಮೆಟ್ರೊದಲ್ಲಿ ಸಂಚರಿಸಿದರು.
ಐಐಟಿ ಮದ್ರಾಸ್ನಲ್ಲಿ ಸುಧಾ ಗೋಪಾಲಕೃಷ್ಣನ್ ಬ್ರೈನ್ ಸೆಂಟರ್ ಅನ್ನು ಲೋಕಾರ್ಪಣೆಗೊಳಿಸಲಾಗಿದ್ದು, ಮಿದುಳಿನ ಕೋಶಗಳ ಪರಿವರ್ತನೆ ಮತ್ತು ಸಿ–ಸ್ಟ್ರೋಕ್ ಚಿಕಿತ್ಸೆಗೆ ನೆರವಾಗುವ ಅಟ್ಲಾಸ್ ಬಿಡುಗಡೆ ಮಾಡಲಾಗಿದೆ.