
ಸರ್ಕಾರಿ ಶಾಲೆಗಳ ಸುಧಾರಣೆಗಾಗಿ ಹಮ್ಮಿಕೊಂಡಿರುವ ಅಭಿಯಾನದ ಸಂದರ್ಭದಲ್ಲಿ ಮಾತನಾಡಿದ ಐಶ್ವರ್ಯಾ ಡಿಕೆಎಸ್, ಶಿಕ್ಷಕರ ಕೊರತೆಗಿಂತ ಕಾರ್ಯದಕ್ಷತೆಯ ಕೊರತೆಯೇ ದೊಡ್ಡ ಸಮಸ್ಯೆ ಎಂದಿದ್ದಾರೆ.
ಕೆಲವು ಶಿಕ್ಷಕರು ₹1.10 ಲಕ್ಷ ವೇತನ ಪಡೆದರೂ ವಾರದ ಐದೂ ದಿನ ಶಾಲೆಗೆ ಹಾಜರಾಗುವುದಿಲ್ಲ ಎಂದು ಆರೋಪಿಸಿರುವ ಅವರು, ಖಾಸಗಿ ಸಂಸ್ಥೆಗಳಿಗೆ ಹಾಜರಾತಿ ಪ್ರಶ್ನಿಸುವ ಅಧಿಕಾರವಿರಬೇಕು ಎಂದಿದ್ದಾರೆ.
ಆದರೆ ಕರ್ನಾಟಕದಲ್ಲಿ ನೀತಿ ಆಯೋಗದ ಅಂಕಿಅಂಶಗಳ ಪ್ರಕಾರ ಸುಮಾರು ಶೇ.22ರಷ್ಟು ಶಿಕ್ಷಕರ ಕೊರತೆಯಿದ್ದು, ಕಲಬುರಗಿ ವಿಭಾಗದಲ್ಲೇ 21,381 ಹುದ್ದೆಗಳು ಖಾಲಿ ಇವೆ.