
ನವದೆಹಲಿಯ ಐಐಟಿ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮುಂದಿನ 30-35 ವರ್ಷಗಳಲ್ಲಿ ಯುವಕರು ಕೈಗೊಳ್ಳುವ ನಿರ್ಧಾರಗಳು ದೇಶದ ಹಿತಾಸಕ್ತಿ ಕಾಪಾಡಬೇಕು ಎಂದಿದ್ದಾರೆ.
ಸ್ಕೈರೂಟ್ ಸಂಸ್ಥೆಯ 'ವಿಕ್ರಮ್-1' ರಾಕೆಟ್ ಯಶಸ್ಸನ್ನು ಉಲ್ಲೇಖಿಸಿದ ಅವರು, ಬಾಹ್ಯಾಕಾಶ ಮತ್ತು ಡ್ರೋನ್ ತಂತ್ರಜ್ಞಾನ ಕ್ಷೇತ್ರದಲ್ಲಿ ಯುವಕರಿಗೆ ಅಪಾರ ಅವಕಾಶಗಳಿವೆ ಎಂದು ತಿಳಿಸಿದ್ದಾರೆ.
ಸಾಮಾನ್ಯ ಹಿನ್ನೆಲೆಯಿಂದ ಬಂದ ಯುವಕರು ಇಂದು ಅತ್ಯಂತ ಸಂಕೀರ್ಣವಾದ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಮೈಲಿಗಲ್ಲು ಸಾಧಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ಮೋದಿ ಶ್ಲಾಘಿಸಿದ್ದಾರೆ.