
ಬಿಗ್ ಬಾಸ್ ಖ್ಯಾತಿಯ ನಟ ಶೈನ್ ಶೆಟ್ಟಿ ನಟಿಸಿರುವ, ಸುಮಂತ್ ಭಟ್ ನಿರ್ದೇಶನದ ‘ಶಂಕರಾಭರಣ’ ಸಿನಿಮಾ ನವೆಂಬರ್‌ನಲ್ಲಿ ಬಿಡುಗಡೆಗೆ ಸಜ್ಜಾಗಿದೆ.
ಸಿನಿಮಾದಲ್ಲಿ ನಾಯಕ ಬಸ್ ಡ್ರೈವರ್ ಆಗಿರುವುದರಿಂದ, ಅದೇ ಬಸ್‌ನಲ್ಲಿ ಶೈನ್ ಶೆಟ್ಟಿ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಡಿಫರೆಂಟ್ ಆಗಿ ಪ್ರಚಾರ ಮಾಡುತ್ತಿದ್ದಾರೆ.
ಮಂಗಳೂರಿನಲ್ಲಿ ನಡೆದ ಪಿಲಿನಲಿಕೆ ಕಾರ್ಯಕ್ರಮದಲ್ಲಿ ನಟ ರಾಜ್ ಬಿ. ಶೆಟ್ಟಿ ಅವರು ಚಿತ್ರತಂಡವನ್ನು ಭೇಟಿಯಾಗಿ ಸಿನಿಮಾವನ್ನು ವೀಕ್ಷಿಸುವಂತೆ ಪ್ರೇಕ್ಷಕರಲ್ಲಿ ಮನವಿ ಮಾಡಿ ಬೆಂಬಲ ಸೂಚಿಸಿದ್ದಾರೆ.