
ಉತ್ತರ ಪ್ರದೇಶದ ಮೈನ್ಪುರಿ ಜಿಲ್ಲೆಯಲ್ಲಿ, ತಂದೆ ನಿಶ್ಚಯಿಸಿದ್ದ ಮದುವೆಗೆ ಒಪ್ಪದೆ ಪ್ರೀತಿಸಿದ ಯುವಕನನ್ನೇ ಮದುವೆಯಾಗುವುದಾಗಿ ಹೇಳಿದ 19ರ ಯುವತಿ ಮೇಲೆ ತಂದೆಯೇ ಗುಂಡು ಹಾರಿಸಿದ್ದಾನೆ.
ಕೂಲಿ ಕಾರ್ಮಿಕನಾದ ತಂದೆ ಅಸಿನ್ ಖಾನ್, ನವೆಂಬರ್ 19ರಂದು ಬೇರೆ ಯುವಕನೊಂದಿಗೆ ಮದುವೆ ನಿಶ್ಚಯಿಸಿದ್ದನು. ಇದಕ್ಕೆ ನಿರಾಕರಿಸಿದ ಮಗಳ ತಲೆಗೆ ಗುಂಡು ಹಾರಿಸಿದ್ದಾನೆ.
ಗುಂಡೇಟಿನಿಂದ ಗಂಭೀರ ಗಾಯಗೊಂಡ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿ ಕೊಲೆ ಯತ್ನದ ಪ್ರಕರಣ ದಾಖಲಿಸಿದ್ದಾರೆ.