
ಗ್ರೇಟರ್ ಬೆಂಗಳೂರು ಪ್ರಾಧಿಕಾರವು ನಗರದ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸಲು ಮಾಲೀಕರಿಗೆ ಆಗಸ್ಟ್ 15ರ ಗಡುವು ನೀಡಿದ್ದು, ತಪ್ಪಿದಲ್ಲಿ ಪಾಲಿಕೆಯೇ ಸ್ವಚ್ಛಗೊಳಿಸಿ ವೆಚ್ಚವನ್ನು ಮಾಲೀಕರಿಂದ ವಸೂಲಿ ಮಾಡಲಿದೆ.
ನಿಯಮ ಉಲ್ಲಂಘಿಸುವ ಮಾಲೀಕರಿಗೆ ಮೊದಲ ಬಾರಿ 25,000 ರೂ. ಮತ್ತು ನಂತರದ ಉಲ್ಲಂಘನೆಗಳಿಗೆ 50,000 ದಿಂದ 1 ಲಕ್ಷ ರೂ. ವರೆಗೆ ದಂಡ ವಿಧಿಸಲಾಗುವುದು.
ಸಾರ್ವಜನಿಕರು ಅಶುಚಿಯಾದ ನಿವೇಶನಗಳ ಬಗ್ಗೆ 9448197197 ವಾಟ್ಸ್ಆಪ್ ಸಂಖ್ಯೆಗೆ ಜಿಪಿಎಸ್ ಲೊಕೇಶನ್ ಮತ್ತು ಫೋಟೋಗಳೊಂದಿಗೆ ದೂರು ನೀಡಲು ಅವಕಾಶ ಕಲ್ಪಿಸಲಾಗಿದೆ.