
ತುಮಕೂರು ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 20,000 ಎಕರೆ ಪ್ರದೇಶದಲ್ಲಿ ಬೃಹತ್ ಕೈಗಾರಿಕಾ ಹಬ್ ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರಿಗೆ ಮೆಟ್ರೋ ರೈಲು ಸಂಪರ್ಕ ಕಲ್ಪಿಸುವ ಸಂಬಂಧ ವಿವರವಾದ ಕಾರ್ಯಸಾಧ್ಯತಾ ಅಧ್ಯಯನ ಹಾಗೂ ಯೋಜನಾ ವರದಿ (DPR) ಪೂರ್ಣಗೊಂಡಿದ್ದು, ಆಸಕ್ತ ಸಂಸ್ಥೆಗಳಿಂದ ಆಸಕ್ತಿ ಅಭಿವ್ಯಕ್ತಿ ಆಹ್ವಾನಿಸುವ ಹಂತ ತಲುಪಿದೆ.
ಧಾನ್ಯ ವ್ಯಾಪಾರಿಗಳ ಸಂಘದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ಧಗಂಗಾ ಮಠದ ಕೊಡುಗೆ ಹಾಗೂ ತುಮಕೂರು-ಬೆಂಗಳೂರು ಸಂಪರ್ಕದ ಮಹತ್ವವನ್ನು ವಿವರಿಸಿದರು.