
ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಬಿಎಂಆರ್ಸಿಎಲ್ ನಿರೀಕ್ಷಿಸಿದಷ್ಟು ಪ್ರಯಾಣಿಕರು ಸಂಚರಿಸುತ್ತಿಲ್ಲ ಎಂಬ ಅಂಶ ಭಾರತೀಯ ಸಿಎಜಿ ವರದಿಯಿಂದ ಬಹಿರಂಗಗೊಂಡಿದ್ದು, ಸಂಸ್ಥೆಯು ಆರ್ಥಿಕ ನಷ್ಟ ಎದುರಿಸುತ್ತಿದೆ.
ಪ್ರಸ್ತುತ ಮೆಟ್ರೋದಲ್ಲಿ ದಿನಪ್ರತಿ ಸರಾಸರಿ 10.50 ಲಕ್ಷ ಪ್ರಯಾಣಿಕರು ಮಾತ್ರ ಸಂಚಾರ ಮಾಡುತ್ತಿದ್ದು, ಕೊನೆಯ ಹಂತದ ಸಂಪರ್ಕದ ಕೊರತೆ ಹಾಗೂ ರೈಲುಗಳ ಅಭಾವ ಇದಕ್ಕೆ ಪ್ರಮುಖ ಕಾರಣವಾಗಿದೆ.
ನಷ್ಟದಿಂದ ಪಾರಾಗಲು ಸಂಚಾರ ಅವಧಿಯನ್ನು ರಾತ್ರಿ 12ರ ನಂತರವೂ ವಿಸ್ತರಿಸುವುದು ಹಾಗೂ ಬೋಗಿಗಳ ಸಂಖ್ಯೆಯನ್ನು 8ರಿಂದ 9ಕ್ಕೆ ಹೆಚ್ಚಿಸಲು ತಜ್ಞರು ಸಲಹೆ ನೀಡಿದ್ದಾರೆ.