
ಟೀಮ್ ಇಂಡಿಯಾ ಆಟಗಾರರ ಫಿಟ್ನೆಸ್ ಸುಧಾರಿಸಲು ಬಿಸಿಸಿಐ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದು, ಇನ್ಮುಂದೆ ಆಯ್ಕೆ ಪ್ರಕ್ರಿಯೆಯಲ್ಲಿ ಯೋ-ಯೋ ಟೆಸ್ಟ್ ಬದಲು ಎರಡು ಹಂತದ ಪರೀಕ್ಷೆಗಳನ್ನು ಕಡ್ಡಾಯಗೊಳಿಸಿದೆ.
ಆಟಗಾರರು 1,200 ಮೀಟರ್ ದೂರವನ್ನು 5 ನಿಮಿಷ 20 ಸೆಕೆಂಡ್ ಒಳಗಡೆ ಪೂರ್ಣಗೊಳಿಸುವ 'ಬ್ರಾಂಕೋ ಟೆಸ್ಟ್' ಮತ್ತು 2 ಕಿಲೋಮೀಟರ್ ಓಟವನ್ನು 10 ನಿಮಿಷದೊಳಗೆ ಕ್ರಮಿಸುವ ಪರೀಕ್ಷೆಗಳನ್ನು ಪಾಸ್ ಮಾಡುವುದು ಕಡ್ಡಾಯವಾಗಿದೆ.
ಯಾವುದೇ ಹಿರಿಯ ಅಥವಾ ಸ್ಟಾರ್ ಆಟಗಾರರಿಗೆ ವಿನಾಯಿತಿ ಇಲ್ಲದ ಈ ಹೊಸ ನಿಯಮವು, ಪ್ರತಿ ಅಂತರರಾಷ್ಟ್ರೀಯ ಸರಣಿಗೂ ಮುನ್ನ ಆಟಗಾರರ ದೈಹಿಕ ಸಾಮರ್ಥ್ಯವನ್ನು ಪರೀಕ್ಷಿಸಲು ಬೆಂಗಳೂರಿನ ಎನ್‌ಸಿಎ ರೂಪಿಸಿದೆ.