
ಬೆಂಗಳೂರಿನಲ್ಲಿ ಹಣದ ಆಸೆಗೆ ಬಿದ್ದು ನೆರೆಮನೆಯ ಬಾಲಕ ಪ್ರಜ್ವಲ್‌ನನ್ನು ಅಪಹರಿಸಿ ಹತ್ಯೆ ಮಾಡಿದ್ದ ವಾಕಾ ಭಾಸ್ಕರ್ ರೆಡ್ಡಿ ಹಾಗೂ ಕೊಂಡಲರೆಡ್ಡಿಯನ್ನು ಚಿಕ್ಕಜಾಲ ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಅಪಹರಣಕ್ಕೂ ಮುನ್ನವೇ ಬಾಲಕನಿಂದ 'ನನ್ನನ್ನು ಕಿಡ್ನ್ಯಾಪ್ ಮಾಡಿದ್ದಾರೆ, ಹಣ ಕೊಟ್ಟು ಕಾಪಾಡಿ' ಎಂದು ಎರಡು ಪ್ರತ್ಯೇಕ ವಿಡಿಯೋಗಳನ್ನು ಆರೋಪಿಗಳು ರೆಕಾರ್ಡ್ ಮಾಡಿಸಿದ್ದರು.
ಆನ್‌ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ಚಟದಿಂದ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ ಎಂ.ಟೆಕ್ ಪದವೀಧರ ಭಾಸ್ಕರ್ ರೆಡ್ಡಿ, ಸಾಲ ತೀರಿಸಲು ಈ ಕೃತ್ಯ ಎಸಗಿರುವುದು ತನಿಖೆಯಿಂದ ಬಯಲಾಗಿದೆ.