
ಕ್ಯಾನ್ಸರ್ ಚಿಕಿತ್ಸೆಯ ಕೀಮೋಥೆರಪಿ ಇಂಜೆಕ್ಷನ್‌ಗೆ ಕೇವಲ 11,000 ರೂ. ಇದ್ದ ಮೂಲ ಬೆಲೆಯ ಬದಲು ಖಾಸಗಿ ಆಸ್ಪತ್ರೆಯು ರೋಗಿಗೆ 1.3 ಲಕ್ಷ ರೂ. ಬಿಲ್ ಮಾಡಿರುವುದನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಖಂಡಿಸಿದೆ.
ಉತ್ಪಾದಕರಿಂದ ಭಾರಿ ರಿಯಾಯಿತಿ ಪಡೆದು ರೋಗಿಗಳಿಂದ ನೂರಾರು ಪಟ್ಟು ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದ್ದು, ಇದು ಸುಲಿಗೆಯಾಗಿದೆ ಎಂದು ನ್ಯಾಯಪೀಠ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಎಲ್ಲಾ ವಾದಗಳನ್ನು ಆಲಿಸಿರುವ ಸುಪ್ರೀಂ ಕೋರ್ಟ್ ಈ ಪ್ರಕರಣದ ತೀರ್ಪನ್ನು ಕಾಯ್ದಿರಿಸಿದ್ದು, ಮುಂದಿನ ದಿನಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕಠಿಣ ನಿಯಮಗಳು ಜಾರಿಯಾಗುವ ನಿರೀಕ್ಷೆಯಿದೆ.