
ಏಷ್ಯಾದ ಎರಡನೇ ಅತಿದೊಡ್ಡ ಕೆರೆ ಎನಿಸಿರುವ ದಾವಣಗೆರೆ ಜಿಲ್ಲೆಯ ಐತಿಹಾಸಿಕ ಸೂಳೆಕೆರೆಗೆ ಋಣ ತೀರಿಸಲು ರೈತರು ಮುಂದಾಗಿದ್ದು, ಸೂಳೆಕೆರೆ ಹಬ್ಬವನ್ನು ಆಚರಿಸಲು ಚಿಂತನೆ ನಡೆಸಿದ್ದಾರೆ.
5,460 ಎಕರೆ ವಿಸ್ತೀರ್ಣ ಹೊಂದಿರುವ ಈ ಕೆರೆಯು ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ಸುಮಾರು 150 ಗ್ರಾಮಗಳು ಹಾಗೂ 9 ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸುತ್ತದೆ.
ಸುಮಾರು 11ನೇ ಶತಮಾನದಲ್ಲಿ ಸೂಳೆ ಸಂಗವ್ವ ನಿರ್ಮಿಸಿದರೆಂದು ಹೇಳಲಾಗುವ ಈ ಕೆರೆ ಭದ್ರಾ ನಾಲಾ ಯೋಜನೆಯಿಂದ ಮರುಜೀವ ಪಡೆದು ಸಾವಿರಾರು ಎಕರೆ ಕೃಷಿ ಭೂಮಿಗೆ ನೀರಾವರಿ ಒದಗಿಸುತ್ತಿದೆ.