
ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯನ್ನು (CBFC) ಮರುರಚಿಸಲಾಗಿದ್ದು, ಪಲ್ಲವಿ ಜೋಶಿ, ಸುನೀಲ್ ಶೆಟ್ಟಿ, ಪ್ರೀತಿ ಜಿಂಟಾ ಸೇರಿದಂತೆ 18 ಮಂದಿಯನ್ನು ಹೊಸ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಸಿನಿಮಾಟೋಗ್ರಾಫ್ ಕಾಯ್ದೆ ಹಾಗೂ ನಿಯಮಗಳ ಅಡಿಯಲ್ಲಿ ಈ ಹೊಸ ಮಂಡಳಿಯನ್ನು ರಚಿಸಿದ್ದು, ಸದಸ್ಯರ ಈ ಅವಧಿಯು ಮೂರು ವರ್ಷಗಳಾಗಿರಲಿದೆ.
ಹೊಸ ಮಂಡಳಿಯ ಸದಸ್ಯರು ಬದಲಾಗಿದ್ದರೂ, ಶಶಿ ಶೇಖರ್ ವೆಂಪತಿ ಅವರು ಮಂಡಳಿಯ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ತಿಳಿಸಲಾಗಿದೆ.