
100 ಗ್ರಾಂ ಖರ್ಜೂರದಲ್ಲಿ 8 ಗ್ರಾಂ ಫೈಬರ್ ಮತ್ತು 656 mg ಪೊಟ್ಯಾಸಿಯಂ ಇದ್ದರೆ, ಅಂಜೂರದಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಎ, ಸಿ, ಇ, ಕೆ ಅಂಶಗಳು ಅಧಿಕವಾಗಿವೆ.
ಖರ್ಜೂರವು ತ್ವರಿತ ಶಕ್ತಿಯನ್ನು ನೀಡಲು ಮತ್ತು ಜೀರ್ಣಕ್ರಿಯೆಗೆ ಸಹಕಾರಿಯಾಗಿದ್ದರೆ, ಅಂಜೂರವು ಮೂಳೆಗಳ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ.
ಎರಡೂ ಡ್ರೈ ಫ್ರೂಟ್ಸ್ ಆರೋಗ್ಯಕರವಾಗಿದ್ದರೂ, ಮಧುಮೇಹ ಇರುವವರು ನೈಸರ್ಗಿಕ ಸಕ್ಕರೆ ಅಂಶವನ್ನು ಗಮನದಲ್ಲಿಟ್ಟುಕೊಂಡು ಮಿತ ಪ್ರಮಾಣದಲ್ಲಿ ಸೇವಿಸುವುದು ಸೂಕ್ತ.