
ಅಮೆರಿಕದ ಮೊಂಟಾನಾದಲ್ಲಿ ರೈತ ಜೋಡಿ ಪಿಯರ್ಸನ್ ಅವರಿಗೆ ದೊರೆತ ಅಪರೂಪದ 'ಜೋಡಿ' ಎಂಬ ಡೈನೋಸಾರ್ ಅಸ್ಥಿಪಂಜರ ನ್ಯೂಯಾರ್ಕ್ನ ಸೋಥೆಬಿಸ್ ಹರಾಜಿನಲ್ಲಿ ಮಾರಾಟವಾಗಿದೆ.
ಸುಮಾರು 12 ನಿಮಿಷಗಳ ಕಾಲ ನಡೆದ ತೀವ್ರ ಪೈಪೋಟಿಯ ಬಳಿಕ ಈ ಅಪರೂಪದ ಟಿ-ರೆಕ್ಸ್ ಪ್ರಭೇದದ ಅಸ್ಥಿಪಂಜರವು 4.73 ಮಿಲಿಯನ್ ಡಾಲರ್ ಅಂದರೆ ಸುಮಾರು 450 ಕೋಟಿ ರೂ.ಗೆ ಮಾರಾಟವಾಯಿತು.
ಸುಮಾರು 9.6 ಅಡಿ ಎತ್ತರ ಹಾಗೂ 19.6 ಅಡಿ ಉದ್ದವಿರುವ ಈ ಟಿ-ರೆಕ್ಸ್ ಅಸ್ಥಿಪಂಜರವು ಅತ್ಯಂತ ಸುರಕ್ಷಿತ ಸ್ಥಿತಿಯಲ್ಲಿ ಪತ್ತೆಯಾಗಿರುವ ಮೂರು ನ್ಯಾನೊಟೈರಾನಸ್ ಮಾದರಿಗಳಲ್ಲಿ ಒಂದಾಗಿದೆ.