
ಪಾಕಿಸ್ತಾನದ ಕರಾಚಿಯಲ್ಲಿರುವ ಗಣೇಶ್ ಮಠ್ ಮಂದಿರದಲ್ಲಿ ಮುಸ್ಲಿಂ ಕಲಾವಿದನೊಬ್ಬ ಗಣಪತಿ ಮೂರ್ತಿಗೆ ಭಕ್ತಿಯಿಂದ ಬಣ್ಣ ಬಳಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಂಟೆಂಟ್ ಕ್ರಿಯೇಟರ್ ಅಮರ್ ಪ್ರಕಾಶ್ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದು, ಮರಾಠಿ ಕುಟುಂಬವೊಂದು ನಡೆಸುತ್ತಿರುವ ದೇವಸ್ಥಾನಕ್ಕಾಗಿ ಈ ಮೂರ್ತಿಯನ್ನು ಸಿದ್ಧಪಡಿಸಲಾಗುತ್ತಿದೆ.
ಈ ವಿಡಿಯೋ ಕೋಮು ಸೌಹಾರ್ದತೆಯನ್ನು ಸಾರುತ್ತಿದ್ದು, ಕಲೆಗೆ ಯಾವುದೇ ಧರ್ಮದ ಹಂಗಿಲ್ಲ ಎಂಬುದನ್ನು ನೆಟ್ಟಿಗರು ಮೆಚ್ಚುಗೆಯಿಂದ ಕಮೆಂಟ್ ಮಾಡುತ್ತಿದ್ದಾರೆ.