Technology
ಮತದಾರರ ಪಟ್ಟಿಯ 4.16 ಕೋಟಿ ನಮೂನೆಗಳ ಡಿಜಿಟಲೀಕರಣ

ಮತದಾರರ ಪಟ್ಟಿಯ 4.16 ಕೋಟಿ ನಮೂನೆಗಳ ಡಿಜಿಟಲೀಕರಣ

prajavani3h
THE BRIEF
1

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಭಾಗವಾಗಿ ಸೋಮವಾರ ಸಂಜೆ 6ರ ವೇಳೆಗೆ 4.16 ಕೋಟಿ ಗಣತಿ ನಮೂನೆಗಳನ್ನು ಡಿಜಿಟಲೀಕರಿಸಲಾಗಿದೆ ಎಂದು ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.

2

ರಾಜ್ಯದ ಒಟ್ಟು 5.54 ಕೋಟಿ ಮತದಾರರಲ್ಲಿ 73.08 ಲಕ್ಷ ಮಂದಿಯನ್ನು ಎಎಸ್‌ಡಿಡಿಒ ಎಂದು ವರ್ಗೀಕರಿಸಲಾಗಿದ್ದು, ಒಟ್ಟಾರೆ 4.89 ಕೋಟಿ ನಮೂನೆಗಳ ಪ್ರಕ್ರಿಯೆ ಪೂರ್ಣಗೊಂಡಿದೆ.

3

ಇನ್ನೂ 64.64 ಲಕ್ಷ ಗಣತಿ ನಮೂನೆಗಳನ್ನು ವಾಪಸ್ ಸಂಗ್ರಹಿಸಬೇಕಿದ್ದು, ಈ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.