
ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಭಾಗವಾಗಿ ಸೋಮವಾರ ಸಂಜೆ 6ರ ವೇಳೆಗೆ 4.16 ಕೋಟಿ ಗಣತಿ ನಮೂನೆಗಳನ್ನು ಡಿಜಿಟಲೀಕರಿಸಲಾಗಿದೆ ಎಂದು ಚುನಾವಣಾಧಿಕಾರಿ ಕಚೇರಿ ತಿಳಿಸಿದೆ.
ರಾಜ್ಯದ ಒಟ್ಟು 5.54 ಕೋಟಿ ಮತದಾರರಲ್ಲಿ 73.08 ಲಕ್ಷ ಮಂದಿಯನ್ನು ಎಎಸ್ಡಿಡಿಒ ಎಂದು ವರ್ಗೀಕರಿಸಲಾಗಿದ್ದು, ಒಟ್ಟಾರೆ 4.89 ಕೋಟಿ ನಮೂನೆಗಳ ಪ್ರಕ್ರಿಯೆ ಪೂರ್ಣಗೊಂಡಿದೆ.
ಇನ್ನೂ 64.64 ಲಕ್ಷ ಗಣತಿ ನಮೂನೆಗಳನ್ನು ವಾಪಸ್ ಸಂಗ್ರಹಿಸಬೇಕಿದ್ದು, ಈ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.