
ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಬಶೋಲಿ ವ್ಯಾಪ್ತಿಯ ಹೈಡಲ್ ಪವರ್ ಪ್ರಾಜೆಕ್ಟ್ನಲ್ಲಿ ಸಿಐಎಸ್ಎಫ್ ಜವಾನನೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಸಿಬ್ಬಂದಿ ಮೃತಪಟ್ಟಿದ್ದಾರೆ.
ಅಸಿಸ್ಟೆಂಟ್ ಕಮಾಂಡೆಂಟ್ ಅಂಕಿತ ಕುಮಾರ್ ಪಾಂಡೆ, ಸಬ್-ಇನ್ಸ್ಪೆಕ್ಟರ್ ಲಕ್ಷ್ಮಣ್ ಸಿಂಗ್, ಕಾನ್ಸ್ಟೇಬಲ್ ಸಂಜೀವ್ ಕುಮಾರ್ ಹಾಗೂ ಮೊಹಮ್ಮದ್ ರಫೀಕ್ ಈ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ.
ಘಟನೆಯ ನಂತರ ಆರೋಪಿ ಜವಾನನನ್ನು ಪೊಲೀಸರು ಬಂಧಿಸಿದ್ದು, ಸೂಕ್ಷ್ಮ ಘಟಕಗಳಲ್ಲಿ ನಿಯೋಜನೆಗೊಳ್ಳುವ ಸಿಬ್ಬಂದಿಗೆ ವಿಶೇಷ ಸೈಕೋಮೆಟ್ರಿಕ್ ಮೌಲ್ಯಮಾಪನಗಳನ್ನು ನಡೆಸಲು ಸಿಐಎಸ್ಎಫ್ ನಿರ್ಧರಿಸಿದೆ.