
ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಪಂದ್ಯಗಳು ಕೇವಲ 2 ದಿನಗಳಲ್ಲಿ ಮುಕ್ತಾಯವಾಗುತ್ತಿರುವುದನ್ನು ತಡೆಯಲು, ಇನ್ಮುಂದೆ ಬ್ಯಾಟರ್‌ಗಳಿಗೆ ಪೂರಕವಾದ ಪಿಚ್‌ಗಳನ್ನು ಸಿದ್ಧಪಡಿಸಲು ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಧರಿಸಿದೆ.
ಕಳೆದ 2025-26ರ ಶೆಫೀಲ್ಡ್ ಶೀಲ್ಡ್ ಟೂರ್ನಿಯಲ್ಲಿ ಬ್ಯಾಟರ್‌ಗಳ ಪ್ರದರ್ಶನ ಕಳಪೆಯಾಗಿದ್ದರಿಂದ, ಪಿಚ್ ಕ್ಯುರೇಟರ್‌ಗಳಿಗೆ ಹೊಸ ಮಾರ್ಗಸೂಚಿಗಳನ್ನು ನೀಡಲಾಗಿದೆ.
ಪಂದ್ಯದ ಮಧ್ಯದ ಸೆಷನ್ ಸಮಯವನ್ನು 2 ಗಂಟೆ 15 ನಿಮಿಷಗಳಿಗೆ ಹೆಚ್ಚಿಸುವುದು ಮತ್ತು ಸ್ಪಿನ್ನರ್‌ಗಳ ಬಳಕೆಯನ್ನು ಕಡ್ಡಾಯಗೊಳಿಸುವುದು ಸೇರಿದಂತೆ ನಿಯಮಗಳಲ್ಲಿ ಭಾರಿ ಬದಲಾವಣೆ ತರಲಾಗಿದೆ.