
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು (KSEAB) 2026-27ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳ ಅಂತಿಮ ವೇಳಾಪಟ್ಟಿಯನ್ನು ಗುರುವಾರ ಅಧಿಕೃತವಾಗಿ ಬಿಡುಗಡೆ ಮಾಡಿದೆ.
ಮುಂಬರುವ ಜನವರಿ ಮತ್ತು ಫೆಬ್ರವರಿಯಲ್ಲಿ ಜನಗಣತಿ ಇರುವುದರಿಂದ ಪರೀಕ್ಷೆಗಳನ್ನು ಮುಂದೂಡುವಂತೆ ಕೇಂದ್ರ ಜನಗಣತಿ ನಿರ್ದೇಶನಾಲಯ ಕೋರಿದ್ದರೂ, ಸಿಇಟಿ ಮತ್ತು ನೀಟ್ ಸಿದ್ಧತೆಗೆ ತೊಂದರೆಯಾಗಲಿದೆ ಎಂಬ ಕಾರಣಕ್ಕೆ ವೇಳಾಪಟ್ಟಿ ಬದಲಾಗಿಲ್ಲ.
ಪ್ರಕಟಿತ ವೇಳಾಪಟ್ಟಿಯಂತೆ ದ್ವಿತೀಯ ಪಿಯುಸಿ ಪರೀಕ್ಷೆಗಳು ಫೆಬ್ರವರಿ 27 ರಿಂದ ಮಾರ್ಚ್ 18ರವರೆಗೆ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಮಾರ್ಚ್ 22 ರಿಂದ ಏಪ್ರಿಲ್ 5ರವರೆಗೆ ಜರುಗಲಿವೆ.