
ಕಳೆದ ವರ್ಷಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಮಳೆ ಕೊರತೆಯಿದ್ದು, ಕಾವೇರಿ ಜಲಾನಯನ ಪ್ರದೇಶದ ಕೆಆರ್ಎಸ್ ಜಲಾಶಯದ ಒಳಹರಿವು 4,875 ಕ್ಯೂಸೆಕ್ಗೆ ಕುಸಿದಿದೆ.
ಆಲಮಟ್ಟಿ ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್ ಇದ್ದು, ಸದ್ಯ 519.42 ಮೀಟರ್ ನೀರು ಸಂಗ್ರಹವಾಗಿದೆ ಮತ್ತು 27,979 ಕ್ಯೂಸೆಕ್ ಒಳಹರಿವು ಬರುತ್ತಿದೆ.
ಕಬಿನಿ ಜಲಾಶಯದಲ್ಲಿ 82.36 ಅಡಿ ನೀರು ಸಂಗ್ರಹವಿದ್ದು, 10,000 ಕ್ಯೂಸೆಕ್ ಹೊರಹರಿವು ಇದೆ; ತಮಿಳುನಾಡು ಸಲ್ಲಿಸಿರುವ ಅರ್ಜಿಯ ವಿಚಾರಣೆ ಆಗಸ್ಟ್ 17ಕ್ಕೆ ಮುಂದೂಡಲಾಗಿದೆ.