
ಭಾರತೀಯ ರೈಲ್ವೆ ಇಲಾಖೆಯು ರೈಲು ಸಂಚಾರದ ವೇಳೆ ಬೆಂಕಿ ಅವಘಡ ತಡೆಗೆ ಮಹತ್ವದ ಹೆಜ್ಜೆ ಇಟ್ಟಿದ್ದು, ವಿಶೇಷ ಸಿಬ್ಬಂದಿ, ಸಹಾಯವಾಣಿ ಮತ್ತು ಬಹುಹಂತದ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ತಿಳಿಸಿದರು.
ಭಾರತೀಯ ರೈಲ್ವೆಯು 177 ಅಪಘಾತ ಪರಿಹಾರ ರೈಲುಗಳು (ARTಗಳು), 100 ಹೆಚ್ಚಿನ ಸಾಮರ್ಥ್ಯದ 140T ಬ್ರೇಕ್ಡೌನ್ ಡೀಸೆಲ್-ಹೈಡ್ರಾಲಿಕ್ ಕ್ರೇನ್ಗಳು ಮತ್ತು 170 ಅಪಘಾತ ಪರಿಹಾರ ವೈದ್ಯಕೀಯ ಸಲಕರಣೆ (ARME) ಸ್ಕೇಲ್-I ಜಾಲವನ್ನು ಹೊಂದಿದೆ.
2025-26ರ ಅವಧಿಯಲ್ಲಿ ಅಹಮದಾಬಾದ್, ವಡೋದರಾ, ರಾಜ್ಕೋಟ್ ಮತ್ತು ಭಾವನಗರ ವಿಭಾಗಗಳಲ್ಲಿ ನಾಲ್ಕು ಅಣಕು ಪ್ರದರ್ಶನ ಒಳಗೊಂಡಂತೆ ಒಟ್ಟು 71 ಅಣಕು ಕಸರತ್ತುಗಳನ್ನು ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.