
ಸಿನಿಮಾ ಪೈರಸಿ ತಡೆಗಟ್ಟಲು ಕೇಂದ್ರ ಸರ್ಕಾರವು ಪ್ರತ್ಯೇಕ ಆ್ಯಂಟಿ-ಪೈರಸಿ ಪೋರ್ಟಲ್ ಸಿದ್ಧಪಡಿಸುತ್ತಿದ್ದು, ಕಾನೂನು ಜಾರಿ ಪ್ರಕ್ರಿಯೆಯನ್ನು ವೇಗಗೊಳಿಸಲು ನಿರ್ಧರಿಸಿದೆ.
ಈಗಾಗಲೇ ಕೇಂದ್ರ ಸರ್ಕಾರವು ಪೈರಸಿಗೆ ಸಂಬಂಧಿಸಿದ 1,263 ವೆಬ್ಸೈಟ್ಗಳು ಮತ್ತು 4,996 ಟೆಲಿಗ್ರಾಂ ಚಾನಲ್ಗಳು ಸೇರಿದಂತೆ ಒಟ್ಟು 7,393 ಲಿಂಕ್ಗಳನ್ನು ನಿಷ್ಕ್ರಿಯಗೊಳಿಸಿದೆ.
ಪೈರಸಿ ಪಿಡುಗಿನಿಂದ ಚಿತ್ರಮಂದಿರಗಳಿಗೆ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗುತ್ತಿದ್ದು, ಸರ್ಕಾರದ ಈ ಹೊಸ ಕ್ರಮ ಚಿತ್ರರಂಗಕ್ಕೆ ಆನೆಬಲ ನೀಡಲಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.