
ಜಾಗತಿಕ ಸವಾಲುಗಳು ಮತ್ತು ಮಂದಗತಿಯ ನಡುವೆಯೂ ಭಾರತವು ಶೇ. 8ರ ಸಮೀಪದ ವಾರ್ಷಿಕ ಜಿಡಿಪಿ ಪ್ರಗತಿ ದರವನ್ನು ಸಾಧಿಸಿದೆ ಎಂದು ಪ್ರಧಾನಮಂತ್ರಿಗಳ ಮುಖ್ಯ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಪ್ರತಿಪಾದಿಸಿದ್ದಾರೆ.
ಉತ್ಪಾದನಾ ವಲಯ, ಬಲವಾದ ಸೇವಾ ವಲಯ ಹಾಗೂ ಸರ್ಕಾರವು ಮೂಲಸೌಕರ್ಯ ಅಭಿವೃದ್ಧಿಗೆ ನೀಡುತ್ತಿರುವ ಬಂಡವಾಳ ಹೂಡಿಕೆಯು ಈ ಪ್ರಗತಿಗೆ ಪ್ರಮುಖ ಚಾಲನಾ ಶಕ್ತಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ನಿಯಂತ್ರಿತ ಹಣದುಬ್ಬರ ಹಾಗೂ ದೃಢವಾದ ಬ್ಯಾಂಕಿಂಗ್ ರಂಗದ ಬಲದಿಂದ ಭಾರತವು ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.