
ಟಿಎನ್ಪಿಎಲ್ 2026ರ 18ನೇ ಪಂದ್ಯದಲ್ಲಿ ದಿಂಡಿಗಲ್ ಡ್ರಾಗನ್ಸ್ ತಂಡವು 81 ರನ್ಗಳಿಂದ ಸೇಲಂ ಸ್ಪಾರ್ಟನ್ಸ್ ತಂಡವನ್ನು ಸೋಲಿಸಿದೆ.
ಮಳೆ ಕಾರಣ 15 ಓವರ್ಗಳಿಗೆ ಸೀಮಿತವಾಗಿದ್ದ ಪಂದ್ಯದಲ್ಲಿ ದಿಂಡಿಗಲ್ ತಂಡವು 239 ರನ್ ಗಳಿಸಿದ್ದು, ನಾಯಕ ಬಾಬಾ ಇಂದ್ರಜಿತ್ 25 ಎಸೆತಗಳಲ್ಲಿ ಅಜೇಯ 73 ರನ್ ಬಾರಿಸಿದ್ದಾರೆ.
ಗುರಿ ಬೆನ್ನಟ್ಟಿದ ಸೇಲಂ ಸ್ಪಾರ್ಟನ್ಸ್ ತಂಡವು 15 ಓವರ್ಗಳಲ್ಲಿ ಕೇವಲ 158 ರನ್ ಗಳಿಸಲಷ್ಟೇ ಶಕ್ತವಾಯಿತು.