
ಭಾರತ ಮತ್ತು ಭೂತಾನ್ ನಡುವೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ, ಅಭಿವೃದ್ಧಿ ಯೋಜನೆಗಳಿಗಾಗಿ ₹4,000 ಕೋಟಿ ಮೊತ್ತದ ರಿಯಾಯಿತಿ ಸಾಲ ನೀಡುವ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಮತ್ತು ಭೂತಾನ್ ವಿದೇಶಾಂಗ ಕಾರ್ಯದರ್ಶಿ ದಾಶೊ ಪೆಮಾ ದೋರ್ಜಿ ಅವರು ಸಭೆಯ ಜಂಟಿ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಆರೋಗ್ಯ, ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಸಹಕಾರ ವಿಸ್ತರಿಸಲು ನಿರ್ಧರಿಸಲಾಗಿದ್ದು, ಥಿಂಪು ಜಿಯೋಲಾಜಿಕಲ್ ಪಾರ್ಕ್ ಮತ್ತು ಒಲಾಖಾ ಪಾರ್ಕ್‌ಗಳನ್ನು ವರ್ಚುವಲ್ ಆಗಿ ಉದ್ಘಾಟಿಸಲಾಯಿತು.