
ದೇಶದಲ್ಲಿ ಎಕ್ಸ್‌ಪ್ರೆಸ್ ಕಾರಿಡಾರ್ ಹೊರತುಪಡಿಸಿ ನಿರ್ಮಾಣವಾಗುವ ಪ್ರಮುಖ 4 ಮತ್ತು 6 ಪಥದ ರಾಷ್ಟ್ರೀಯ ಹೆದ್ದಾರಿಗಳ ವಿನ್ಯಾಸ ಹಾಗೂ ಸುರಕ್ಷತೆಗಾಗಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಭಾರತವು 'ವಿಕಸಿತ ಭಾರತ 2047' ಯೋಜನೆಯಡಿ 50,000 ಕಿಲೋಮೀಟರ್ ಉದ್ದದ ನಿಯಂತ್ರಿತ ಪ್ರವೇಶ ವ್ಯವಸ್ಥೆಯ ವೇಗದ ಕಾರಿಡಾರ್‌ಗಳನ್ನು ನಿರ್ಮಿಸುವ ಗುರಿ ಹೊಂದಿದೆ.
ಹೊಸ ನಿಯಮಗಳ ಪ್ರಕಾರ 15,000ದಿಂದ 25,000 ವಾಹನಗಳ ದಟ್ಟಣೆಯಿರುವ ಹೈವೇಗಳಲ್ಲಿ 4 ಹಾಗೂ 6 ಲೈನ್‌ಗಳು ಬರಲಿದ್ದು, ಅಪಘಾತ ತಡೆಯಲು ಜಾನುವಾರುಗಳ ಪ್ರವೇಶ ನಿಯಂತ್ರಣಕ್ಕೆ ತಡೆಗೋಡೆ ನಿರ್ಮಿಸಲಾಗುತ್ತದೆ.