
ನಟ ರಾಜ್‌ಪಾಲ್ ಯಾದವ್ ಅವರು ₹16.61 ಕೋಟಿ ಸಾಲ ಮರುಪಾವತಿಸಲು ವಿಫಲವಾದ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 9ರಂದು ಅವರ ಎರಡು ಆಸ್ತಿಗಳನ್ನು ಹರಾಜು ಹಾಕಲು ಸೆಂಟ್ರಲ್ ಬ್ಯಾಂಕ್ ನಿರ್ಧರಿಸಿದೆ.
ಹರಾಜಿಗೆ ಇಡಲಾದ ಆಸ್ತಿಗಳ ಒಟ್ಟು ಮೌಲ್ಯ ಸುಮಾರು ₹3.19 ಕೋಟಿ ಎಂದು ಅಂದಾಜಿಸಲಾಗಿದ್ದು, ಇವು ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿವೆ.
2012ರಲ್ಲಿ ನಿರ್ಮಿಸಿದ ‘ಆತಾ ಪತಾ ಲಾಪತಾ’ ಸಿನಿಮಾದ ಸಾಲದ ಬಾಕಿಗಾಗಿ ನಟನ ಪತ್ನಿ ಮತ್ತು ತಾಯಿಯ ಹೆಸರಿನಲ್ಲಿರುವ ಆಸ್ತಿಗಳ ಮೇಲೂ ಬ್ಯಾಂಕ್ ಕ್ರಮ ಕೈಗೊಂಡಿದೆ.