
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಸೆಪ್ಟೆಂಬರ್ 5ರಂದು ನಡೆದ ಕಾರು ಚಾಲಕ ನಾಗರಾಜು ಬರ್ಬರ ಕೊಲೆ ಪ್ರಕರಣ ರಾಜ್ಯದಲ್ಲಿ ಸಂಚಲನ ಮೂಡಿಸಿದೆ.
ಆರೋಪಿ ಆದಿನಾರಾಯಣ ಕೊಲೆ ಹಾಗೂ ಅದರಿಂದ ತಪ್ಪಿಸಿಕೊಳ್ಳುವ ವಿಧಾನಗಳ ಕುರಿತು ಗೂಗಲ್ ಮತ್ತು ಯೂಟ್ಯೂಬ್ನಲ್ಲಿ ಎರಡು ವರ್ಷಗಳಿಂದಲೇ ಅಧ್ಯಯನ ನಡೆಸಿ ಸಂಚು ರೂಪಿಸಿದ್ದಾನೆ.
ನಿರಂತರವಾಗಿ ಸಿಮ್ಗಳು ಮತ್ತು ಫೋನ್ಗಳನ್ನು ಬದಲಾಯಿಸುವ ಮೂಲಕ ತಾಂತ್ರಿಕ ಜ್ಞಾನ ಬಳಸಿ ಪೊಲೀಸರಿಗೆ ಸವಾಲಾಗಿರುವ ಆರೋಪಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.