
ಮಹಾರಾಷ್ಟ್ರದಲ್ಲಿ ಸುಮಾರು ಎರಡು ವಾರಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಅವರನ್ನು ಕಾಕ್ರೋಚ್ ಜನತಾ ಪಕ್ಷದ ಸಂಚಾಲಕ ಅಭಿಜಿತ್ ದೀಪ್ಕೆ ಶುಕ್ರವಾರ ಭೇಟಿಯಾಗಿದ್ದಾರೆ.
ಉಪವಾಸ ಸತ್ಯಾಗ್ರಹವನ್ನು ಹಿಂಪಡೆದು ಆರೋಗ್ಯದ ಕಡೆ ಗಮನಹರಿಸುವಂತೆ ಜಾರಂಗೆಯಲ್ಲಿ ಮನವಿ ಮಾಡಿರುವುದಾಗಿ ದೀಪ್ಕೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸೋನಮ್ ವಾಂಗ್ಚೂಕ್ ಅವರನ್ನು ದೆಹಲಿ ಪೊಲೀಸರು ತೆರವುಗೊಳಿಸಿದಂತೆ ಜಾರಂಗೆಯೊಂದಿಗೆ ನಡೆದುಕೊಂಡರೆ ಇಡೀ ಮಹಾರಾಷ್ಟ್ರವೇ ಅಂತರವಾಲಿ ಸರಾಟಿಗೆ ಹರಿದುಬರಲಿದೆ ಎಂದು ಅವರು ಎಚ್ಚರಿಸಿದ್ದಾರೆ.