
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿ ಗ್ರಾಮದಲ್ಲಿ ಪತ್ನಿ ಮಂಗಲಾಳನ್ನು ಕುತ್ತಿಗೆ ಹಿಸುಕಿ ಕೊಲೆ ಮಾಡಿದ ಆರೋಪದ ಮೇಲೆ ಪತಿ ಗಣಪತಿ ಮಂಜುನಾಥ ನಾಯ್ಕನನ್ನು ಪೊಲೀಸರು ಬಂಧಿಸಿದ್ದಾರೆ.
ಆಗಸ್ಟ್ 25ರ ಮಧ್ಯರಾತ್ರಿ ನಡೆದ ಈ ಘಟನೆಯ ಬಳಿಕ, ಆರೋಪಿಯು ಪತ್ನಿಗೆ ಹೃದಯಾಘಾತವಾಗಿದೆ ಎಂದು ಸುಳ್ಳು ಕಥೆ ಕಟ್ಟಿ ಕುಟುಂಬಸ್ಥರನ್ನು ನಂಬಿಸಲು ಪ್ರಯತ್ನಿಸಿದ್ದನು.
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಯ ಆಟೋ ರಿಕ್ಷಾ ಮನೆಯಿಂದ ಹೊರಹೋಗಿಲ್ಲ ಎಂಬುದು ಸಾಬೀತಾಗಿದ್ದು, ವಿಚಾರಣೆ ವೇಳೆ ಗಣಪತಿ ನಾಯ್ಕ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.