1999ರಲ್ಲಿ ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಪಾಕಿಸ್ತಾನ ವಿರುದ್ಧ ಅನಿಲ್ ಕುಂಬ್ಳೆ ಒಂದೇ ಇನಿಂಗ್ಸ್‌ನಲ್ಲಿ 10 ವಿಕೆಟ್ ಪಡೆದು ವಿಶ್ವದಾಖಲೆ ನಿರ್ಮಿಸಿದ್ದರು.
ಕುಂಬ್ಳೆ ಅವರಿಗೆ 10ನೇ ವಿಕೆಟ್ ಸಿಗಲಿ ಎಂಬ ಉದ್ದೇಶದಿಂದ ಜಾವಗಲ್ ಶ್ರೀನಾಥ್ ಅವರು ಬೇಕೆಂದೇ ಎರಡು ಓವರ್‌ಗಳ ಕಾಲ ಆಫ್‌ಸ್ಟಂಪ್‌ನಿಂದ ಹೊರಗೆ ವೈಡ್ ಎಸೆತಗಳನ್ನು ಎಸೆದಿದ್ದರು.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಜಿಮ್ ಲೆಕರ್, ಅನಿಲ್ ಕುಂಬ್ಳೆ ಮತ್ತು ಅಜಾಝ್ ಪಟೇಲ್ ಮಾತ್ರ ಒಂದೇ ಇನಿಂಗ್ಸ್‌ನಲ್ಲಿ 10 ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ.