
ಕೇವಲ 1.8 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣವಾದ ‘ಹನುಮಾನ್ ಅಂಶ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 65 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿ ಭರ್ಜರಿ ಯಶಸ್ಸು ಕಂಡಿದೆ.
ಈ ಚಿತ್ರದಲ್ಲಿ ನೀಮ್ ಕರೋಲಿ ಬಾಬಾ ಪಾತ್ರದಲ್ಲಿ ನಟಿಸಿರುವ ಶೋಭಿನವ್ ಸತ್ಯ, ತಮ್ಮ ಮೊದಲ ಸಿನಿಮಾದಲ್ಲೇ ರಾಷ್ಟ್ರಪ್ರಶಸ್ತಿ ಮಟ್ಟದ ಅಭಿನಯ ನೀಡಿದ್ದಾರೆ ಎಂದು ಸಿನಿ ಪಂಡಿತರು ಶ್ಲಾಘಿಸಿದ್ದಾರೆ.
ಎಫ್ಟಿಟಿಐನಲ್ಲಿ ತರಬೇತಿ ಪಡೆದ ಶೋಭಿನವ್, 10 ವರ್ಷಗಳ ಕಾಲ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ನಂತರ ಈ ಚಿತ್ರದ ಮೂಲಕ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.