
ಸೆಪ್ಟೆಂಬರ್ 8 ರಂದು ವಡೋದರಾದಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಡಿಜಿಟಲ್ ನೋಂದಣಿ ಆರಂಭವಾದ ಒಂದೇ ಗಂಟೆಯಲ್ಲಿ ಎಲ್ಲಾ 35,000 ಆಸನಗಳು ಭರ್ತಿಯಾಗಿವೆ.
ಈ ಕಾರ್ಯಕ್ರಮದಲ್ಲಿ 35,000 ಕೋಟಿ ರೂ.ಗೂ ಅಧಿಕ ಮೌಲ್ಯದ ಯೋಜನೆಗಳಿಗೆ ಚಾಲನೆ ಸಿಗಲಿದ್ದು, 20,700 ಕೋಟಿ ರೂ. ವೆಚ್ಚದ ವೆಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ನ 326 ಕಿ.ಮೀ ಭಾಗವೂ ಸೇರಿದೆ.
ಕಾರ್ಯಕ್ರಮಕ್ಕೆ ಭಾರಿ ಬೇಡಿಕೆ ಇದ್ದು, ಸದ್ಯ 42,000ಕ್ಕೂ ಹೆಚ್ಚು ಜನರು ವೇಯ್ಟಿಂಗ್ ಲಿಸ್ಟ್ನಲ್ಲಿದ್ದಾರೆ ಎಂದು ವಡೋದರಾ ಮಹಾನಗರ ಪಾಲಿಕೆ ತಿಳಿಸಿದೆ.