
ಅಮೆರಿಕದ ವಾಯುಪಡೆಯ ಬೋಯಿಂಗ್ ಸಿ-17 ಗ್ಲೋಬ್ಮಾಸ್ಟರ್ III ಮಿಲಿಟರಿ ವಿಮಾನವು ಆಗಸ್ಟ್ 25ರಂದು ರಷ್ಯಾದ ಮಾಸ್ಕೋದ ವ್ನುಕೊವೊ ವಿಮಾನ ನಿಲ್ದಾಣದಲ್ಲಿ ದಿಢೀರ್ ಆಗಿ ಲ್ಯಾಂಡ್ ಆಗಿದೆ.
ಸುಮಾರು 77,500 ಕೆಜಿ ಸಾಮರ್ಥ್ಯದ ಈ ಬೃಹತ್ ಸರಕು ಸಾಗಣೆ ವಿಮಾನವು ಅಮೆರಿಕದ ಜಾಯಿಂಟ್ ಬೇಸ್ ಆಂಡ್ರ್ಯೂಸ್ನಿಂದ ರಿಗಾ ಮೂಲಕ ಮಾಸ್ಕೋ ತಲುಪಿದ್ದು, ರಷ್ಯಾ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದೆ.
ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವೆ ವಿಮಾನಯಾನ ನಿಷೇಧವಿದ್ದರೂ, ಈ ವಿಮಾನದ ಆಗಮನವು ರಾಜತಾಂತ್ರಿಕ ಮಾತುಕತೆ ಅಥವಾ ಕೈದಿಗಳ ವಿನಿಮಯದ ಕುರಿತು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.