
ಕರ್ನಾಟಕದಲ್ಲಿ ಸ್ಟಿಂಗ್ ಆಪರೇಷನ್ ವಿಚಾರ ಸದ್ದು ಮಾಡುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಶಿವಮೊಗ್ಗದ ಸೊರಬ ತಾಲೂಕಿನಲ್ಲಿ ಬಹಿರಂಗ ಹೇಳಿಕೆ ನೀಡಿದ್ದಾರೆ.
ತಮ್ಮ ಮೇಲಾದ ಸ್ಟಿಂಗ್ ಆಪರೇಷನ್ ಮೂಲ ಕರ್ತೃ ಸಚಿವ ಮಧು ಬಂಗಾರಪ್ಪ ಎಂದು ಗಂಭೀರ ಆರೋಪ ಮಾಡಿರುವ ಅವರು, ಈ ಬಗ್ಗೆ ದೇವಸ್ಥಾನದ ಮುಂದೆ ನಿಂತು ಪ್ರಮಾಣ ಮಾಡಿ ಹೇಳುವುದಾಗಿ ತಿಳಿಸಿದ್ದಾರೆ.
ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಸಂತ್ರಹಿತೆ ಎಂದು ಹೇಳಲಾದ ಮಹಿಳೆಗೆ ಆಡಳಿತ ಪಕ್ಷದ ಸಚಿವರ ಮನೆಯಿಂದ ಆರು ತಿಂಗಳಲ್ಲಿ 192 ಬಾರಿ ಫೋನ್ ಮಾಡಲಾಗಿದೆ ಎಂದು ಹಾಲಪ್ಪ ಆರೋಪಿಸಿದ್ದಾರೆ.