
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಕೊನೆಗೊಳಿಸಲು ಜಾಗತಿಕ ಮಟ್ಟದಲ್ಲಿರುವ ನಾಲ್ಕು ಪ್ರಮುಖ ಶಾಂತಿ ಪ್ರಸ್ತಾಪಗಳಲ್ಲಿ ಭಾರತದ ಪ್ರಸ್ತಾಪವೇ ಅತ್ಯಂತ ಸಮಗ್ರವಾಗಿದೆ ಎಂದು ಉಕ್ರೇನ್ ಶ್ಲಾಘಿಸಿದೆ.
ಕೈವ್‌ನಲ್ಲಿ ಮಾತನಾಡಿದ ಉಕ್ರೇನ್ ವಿದೇಶಾಂಗ ಸಚಿವ ಆ್ಯಂಡ್ರಿ ಸಿಬಿಹಾ, ಯುದ್ಧ ನಿಲ್ಲಿಸಲು ಸಕ್ರಿಯ ಮಧ್ಯಸ್ಥಿಕೆ ವಹಿಸಲು ಭಾರತ ಮೊದಲ ಬಾರಿಗೆ ಮುಕ್ತ ಮನಸ್ಸು ತೋರಿದೆ ಎಂದು ತಿಳಿಸಿದರು.
ಇಂಧನ ಮೂಲಸೌಕರ್ಯ ಹಾಗೂ ಕಪ್ಪು ಸಮುದ್ರದ ನೌಕಾ ಮಾರ್ಗಗಳ ಮೇಲಿನ ದಾಳಿಗಳನ್ನು ತಡೆಯುವ ಕದನ ವಿರಾಮ ಪ್ರಸ್ತಾಪಗಳನ್ನು ಒಟ್ಟಾಗಿ ಅನುಷ್ಠಾನಗೊಳಿಸಿದರೆ ಮಾತ್ರ ಒಪ್ಪುವುದಾಗಿ ಉಕ್ರೇನ್ ಷರತ್ತು ವಿಧಿಸಿದೆ.