
ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಕಾವ್ಯಾ ಗೌಡ ಜತೆ ಪಿಸುದನಿಯಲ್ಲಿ ಮಾತನಾಡುವ ಮೂಲಕ ಆಸಿಯಾ ಅವರು ದೊಡ್ಮನೆಯ ನಿಯಮವನ್ನು ಉಲ್ಲಂಘಿಸಿದ್ದಾರೆ.
ನಿಯಮ ಉಲ್ಲಂಘಿಸಿದ್ದಕ್ಕಾಗಿ ಕ್ಯಾಪ್ಟನ್ ಧನುಷ್ ಅವರು ಆಸಿಯಾಗೆ ಪಾತ್ರೆ ತೊಳೆಯುವ ಶಿಕ್ಷೆ ವಿಧಿಸಿದ್ದು, ಇದನ್ನು ಆಸಿಯಾ ವಿರೋಧಿಸಿದ್ದಾರೆ.
ತಾವು ಪಿಸುದನಿಯಲ್ಲಿ ಮಾತನಾಡಿಯೇ ಇಲ್ಲ ಎಂದು ವಾದಿಸಿದ ಆಸಿಯಾ, ಮೈಕ್ ಒತ್ತಿಕೊಂಡಿದ್ದರಿಂದ ಆ ರೀತಿ ಕೇಳಿಸಿದೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.