
ಪ್ರಸಕ್ತ ಹಣಕಾಸು ವರ್ಷದಲ್ಲಿ (FY27) ಒಟ್ಟು 12,000 ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಮತ್ತು ದೇಶಾದ್ಯಂತ 250 ಹೊಸ ಶಾಖೆಗಳನ್ನು ತೆರೆಯಲು ಎಸ್‌ಬಿಐ ಯೋಜನೆ ರೂಪಿಸಿದೆ ಎಂದು ಅಧ್ಯಕ್ಷ ಸಿ.ಎಸ್. ಶೆಟ್ಟಿ ತಿಳಿಸಿದ್ದಾರೆ.
ಕ್ಲರಿಕಲ್ ಮತ್ತು ಆಫೀಸರ್ ಕೇಡರ್‌ನಲ್ಲಿ ಸುಮಾರು 11,000 ದಿಂದ 12,000 ನೇಮಕಾತಿಗಳನ್ನು ವರ್ಷಾಂತ್ಯದೊಳಗೆ ಪೂರ್ಣಗೊಳಿಸುವ ಗುರಿಯನ್ನು ಬ್ಯಾಂಕ್ ಹೊಂದಿದೆ.
ಎನ್‌ಎಸ್‌ಇ ಐಪಿಒದಲ್ಲಿ ಎಸ್‌ಬಿಐ ಮತ್ತು ಎಸ್‌ಬಿಐ ಕ್ಯಾಪಿಟಲ್ ಮಾರ್ಕೆಟ್ಸ್ ಒಟ್ಟಾಗಿ ಶೇ. 1ರಷ್ಟು ಪಾಲನ್ನು ಮಾರಾಟ ಮಾಡಲು ನಿರ್ಧರಿಸಿದ್ದು, ಇದರಲ್ಲಿ ಎಸ್‌ಬಿಐ ಶೇ. 0.65ರಷ್ಟು ಪಾಲನ್ನು ಹಿಂತೆಗೆದುಕೊಳ್ಳಲಿದೆ.