
ಮಂಗಳೂರು ರೈಲ್ವೆ ವಿಭಾಗವನ್ನು ನೈಋತ್ಯ ರೈಲ್ವೆ ವಲಯಕ್ಕೆ ಸೇರಿಸುವ ನಿರ್ಧಾರವನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಖಚಿತಪಡಿಸಿದ್ದು, ಇದರಿಂದ ಕೇರಳಕ್ಕೆ ಹಿನ್ನಡೆಯಾಗಿದೆ.
ಕೇರಳದ ರೈಲ್ವೆ ಅಭಿವೃದ್ಧಿಗಾಗಿ ಕಳೆದ 12 ವರ್ಷಗಳಲ್ಲಿ ಅನುದಾನವನ್ನು 10 ಪಟ್ಟು ಹೆಚ್ಚಿಸಲಾಗಿದ್ದು, ಸದ್ಯ 3,795 ಕೋಟಿ ರೂ. ಅನುದಾನ ನೀಡಲಾಗಿದೆ.
ರಾಜ್ಯದಲ್ಲಿ 20,000 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ರೈಲ್ವೆ ಯೋಜನೆಗಳು ನಡೆಯುತ್ತಿದ್ದು, 145 ರಸ್ತೆ ಮೇಲ್ಸೇತುವೆ ಮತ್ತು ಅಂಡರ್ ಬ್ರಿಡ್ಜ್ ಗಳ ಕಾಮಗಾರಿ ಪ್ರಗತಿಯಲ್ಲಿದೆ.