Indian Politics
ಏರ್ಕಾಡ್ ಅರಣ್ಯ ಪ್ರದೇಶದಲ್ಲಿ ಹತ್ಯೆಗೊಳಗಾದವರ ಶವ ಪತ್ತೆ

ಏರ್ಕಾಡ್ ಅರಣ್ಯ ಪ್ರದೇಶದಲ್ಲಿ ಹತ್ಯೆಗೊಳಗಾದವರ ಶವ ಪತ್ತೆ

prajavani7h
THE BRIEF
1

ಒಂದೇ ಕುಟುಂಬದ ಏಳು ಜನರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸೇಲಂ ಸಮೀಪದ ಏರ್ಕಾಡ್‌ ಅರಣ್ಯ ಪ್ರದೇಶದಲ್ಲಿ ಆರೋಪಿ ಇಂದುಶೇಖರ್‌ನ ಪತ್ನಿ ಸುನಿತಾ ಹಾಗೂ ಅತ್ತೆ ರೂಪವತಿ ಅವರ ಕೊಳೆತ ಶವಗಳು ಪತ್ತೆಯಾಗಿವೆ.

2

ಹದಿನೈದು ಪೊಲೀಸ್ ಸಿಬ್ಬಂದಿ ಸ್ಥಳೀಯರ ನೆರವಿನಿಂದ ಎಂಟು ತಾಸು ಶೋಧ ನಡೆಸಿ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದ ಈ ಶವಗಳನ್ನು ಪತ್ತೆ ಮಾಡಿದ್ದಾರೆ.

3

ಮೃತರ ಇತರ ಸಂಬಂಧಿಕರ ಶವಗಳ ಪತ್ತೆಗಾಗಿ ಶಿರಾಡಿ ಘಾಟ್, ಚಾರ್ಮಾಡಿ ಘಾಟ್ ಹಾಗೂ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಪ್ರತ್ಯೇಕ ಪೊಲೀಸ್ ತಂಡಗಳು ಶೋಧ ಕಾರ್ಯ ಮುಂದುವರಿಸಿವೆ.