
ಕಾವೇರಿ ನದಿ ನೀರಿನ ವಿವಾದದ ಹಿನ್ನೆಲೆಯಲ್ಲಿ ಕನ್ನಡ ಪರ ಸಂಘಟನೆಗಳ ಪ್ರತಿಭಟನೆಯಿಂದಾಗಿ ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ ತಮಿಳು ಸಿನಿಮಾ 'ಜನನಾಯಗನ್' ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ.
ನಗರದಲ್ಲಿ ನಿನ್ನೆ 500ಕ್ಕೂ ಹೆಚ್ಚು ಶೋಗಳಿದ್ದ ಈ ಚಿತ್ರದ ಪ್ರದರ್ಶನ ಇಂದು ಕೇವಲ 100ಕ್ಕೆ ಇಳಿಕೆಯಾಗಿದ್ದು, ಅಂಜನ್ ಥಿಯೇಟರ್ ಸೇರಿದಂತೆ ಹಲವು ಕಡೆ ಪೋಸ್ಟರ್ಗಳನ್ನು ತೆರವುಗೊಳಿಸಲಾಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಚಿತ್ರಮಂದಿರಗಳ ಮಾಲೀಕರು ಸ್ವಯಂಪ್ರೇರಿತರಾಗಿ ತಮಿಳು ಚಿತ್ರದ ಬದಲಿಗೆ ಇಂಗ್ಲಿಷ್ ಮತ್ತು ತೆಲುಗು ಸಿನಿಮಾಗಳನ್ನು ಪ್ರದರ್ಶಿಸುತ್ತಿದ್ದಾರೆ.