
ಬೆಂಗಳೂರು ಉತ್ತರ ತಾಲೂಕಿನ ನೆಲಕದಿರನಹಳ್ಳಿ ಗ್ರಾಮದ 59 ಎಕರೆ 6 ಗುಂಟೆ ಜಮೀನಿನ ಸ್ವಾಧೀನ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಹಾಗೂ ಕೆ. ವಿನೋದ್ ಚಂದ್ರನ್ ಅವರ ಪೀಠವು ಹೈಕೋರ್ಟ್ ಏಕಸದಸ್ಯ ಪೀಠದ ಮೂಲ ಆದೇಶವನ್ನು ಎತ್ತಿಹಿಡಿದಿದೆ.
ಮೂಲ ಭೂಮಾಲೀಕರಿಗೆ ತಕ್ಷಣವೇ ಸ್ವಾಧೀನ ಹಕ್ಕು ಹಸ್ತಾಂತರಿಸಲು ಮತ್ತು ಪರಿಹಾರ ಪಡೆದವರು ಬಡ್ಡಿ ರಹಿತವಾಗಿ ಹಣ ಮರಳಿಸಲು ಸೂಚಿಸಲಾಗಿದೆ.