
ಬೆಂಗಳೂರಿನ ‘ಇ-ಆಸ್ತಿ’ ತಂತ್ರಾಂಶದಲ್ಲಿದ್ದ ಬ್ಯಾಂಕ್ ಹರಾಜು ನಿಯಮಾವಳಿಯ ಅವಕಾಶ ದುರ್ಬಳಕೆ ಮಾಡಿಕೊಂಡು 100ಕ್ಕೂ ಹೆಚ್ಚು ಫ್ಲಾಟ್‌ಗಳಿಗೆ ಅಕ್ರಮವಾಗಿ ಇ-ಖಾತಾ ನೀಡಿದ ಜಿಬಿಎಯ ಇಬ್ಬರು ಹಿರಿಯ ಕಂದಾಯ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಬೆಂಗಳೂರು ಪೂರ್ವ ಪಾಲಿಕೆಯ ಪ್ರಭಾರ ಕಂದಾಯ ಅಧಿಕಾರಿ ಬಸವರಾಜ್ ಮಗಿ ಮತ್ತು ಪಶ್ಚಿಮ ಪಾಲಿಕೆಯ ಪ್ರಭಾರ ಕಂದಾಯ ಅಧಿಕಾರಿ ಲೋಕಮಾತಾ ಡಿ.ಎಸ್. ಅಮಾನತುಗೊಂಡವರಾಗಿದ್ದು, ಕಂದಾಯ ನಿರೀಕ್ಷಕರ ನಕಾರಾತ್ಮಕ ವರದಿ ಮೀರಿಯೂ ಇವರು ಈ ಕೃತ್ಯ ಎಸಗಿದ್ದಾರೆ.
ಸರ್ಫೇಸಿ ಕಾಯ್ದೆಯಡಿಯಲ್ಲಿ ಹರಾಜಾದ ಆಸ್ತಿಗಳಿಗೆ ಮಾತ್ರವಿದ್ದ ಇ-ಖಾತಾ ಸೌಲಭ್ಯವನ್ನು ಸಾಮಾನ್ಯ ಕ್ರಯಪತ್ರಗಳಿಗೂ ದುರ್ಬಳಕೆ ಮಾಡಿಕೊಂಡು ಸುತ್ತೋಲೆಗಳನ್ನು ಉಲ್ಲಂಘಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.