ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಫಾರೂಕ್ ಇಂಜಿನಿಯರ್, 15ರ ಹರೆಯದ ವೈಭವ್ ಸೂರ್ಯವಂಶಿಯನ್ನು 2027ರ ಏಕದಿನ ವಿಶ್ವಕಪ್ಗೆ ಮುನ್ನವೇ ಭಾರತ ಏಕದಿನ ತಂಡಕ್ಕೆ ಸೇರಿಸುವಂತೆ ಸಲಹೆ ನೀಡಿದ್ದಾರೆ.
ಸೂರ್ಯವಂಶಿಯನ್ನು ರೋಹಿತ್ ಶರ್ಮಾ ಅವರೊಂದಿಗೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿಸಿ, ಶುಭ್ಮನ್ ಗಿಲ್ ಅವರನ್ನು 4ನೇ ಕ್ರಮಾಂಕದಲ್ಲಿ ಆಡಿಸುವಂತೆ ಬಿಸಿಸಿಐ ಆಯ್ಕೆ ಸಮಿತಿಗೆ ಇಂಜಿನಿಯರ್ ಸೂಚಿಸಿದ್ದಾರೆ.
ಜಿಂಬಾಬ್ವೆ ವಿರುದ್ಧದ ಇತ್ತೀಚಿನ 3 ಪಂದ್ಯಗಳ ಸರಣಿಯಲ್ಲಿ 2 ಅರ್ಧಶತಕಗಳೊಂದಿಗೆ 151 ರನ್ ಕಲೆಹಾಕಿದ ಸೂರ್ಯವಂಶಿ 'ಸರಣಿ ಶ್ರೇಷ್ಠ' ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.