
2026ರ ಜನವರಿಯಿಂದ ಆಗಸ್ಟ್ ಅವಧಿಯಲ್ಲಿ ಜಾಗತಿಕ ತಂತ್ರಜ್ಞಾನ ವಲಯದಲ್ಲಿ 1,23,300ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದು, ಇದು 2025ರ ಇಡೀ ವರ್ಷದ ಒಟ್ಟು ಉದ್ಯೋಗ ಕಡಿತಕ್ಕಿಂತ ಅಧಿಕವಾಗಿದೆ.
ಅರಾಕಲ್ 21,000, ಅಮೇಜಾನ್ 17,267, ಡೆಲ್ 11,000, ಮೆಟಾ 10,400 ಮತ್ತು ಮೈಕ್ರೋಸಾಫ್ಟ್ 4,800 ಉದ್ಯೋಗಿಗಳನ್ನು ವಜಾಗೊಳಿಸಿದ್ದು, ಪೇಪಾಲ್, ಸಿಸ್ಕೋ ಸೇರಿದಂತೆ ಹಲವು ಕಂಪನಿಗಳು ಲೇ ಆಫ್ ಮಾಡಿವೆ.
ಕಂಪನಿಗಳು ಕೃತಕ ಬುದ್ಧಿಮತ್ತೆ (AI) ಮತ್ತು ಕ್ಲೌಡ್ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಹೂಡಿಕೆ ಮಾಡುತ್ತಿದ್ದು, ವರ್ಷಾಂತ್ಯದವರೆಗೆ ತಂತ್ರಜ್ಞಾನ ಸಂಸ್ಥೆಗಳಲ್ಲಿ ಮರುರಚನೆ ಪ್ರಕ್ರಿಯೆ ಮುಂದುವರಿಯುವ ಸಾಧ್ಯತೆಯಿದೆ.