
ಶಕ್ತಿಮಾನ್ ಸಿನಿಮಾ ಪಾತ್ರಕ್ಕೆ ರಣವೀರ್ ಸಿಂಗ್ ಸೂಕ್ತವಲ್ಲ ಎಂದು ಮುಕೇಶ್ ಖನ್ನಾ ಸ್ಪಷ್ಟಪಡಿಸಿದ್ದು, ಈ ನಿರ್ಧಾರದಿಂದ ಕೋಟ್ಯಂತರ ರೂಪಾಯಿ ಆಫರ್ ಕಳೆದುಕೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ರಣವೀರ್ ಸಿಂಗ್ ಅತ್ಯುತ್ತಮ ನಟನಾದರೂ, ಶಕ್ತಿಮಾನ್ ಪಾತ್ರಕ್ಕೆ ಬೇಕಾದ ಸಕಾರಾತ್ಮಕ ಮುಖ ಮತ್ತು ಇಮೇಜ್ ಅವರಿಗಿಲ್ಲ ಎಂದು ಮುಕೇಶ್ ಖನ್ನಾ ಅಭಿಪ್ರಾಯಪಟ್ಟಿದ್ದಾರೆ.
ಶಕ್ತಿಮಾನ್ ಪರಂಪರೆಯನ್ನು ಉಳಿಸುವುದು ತಮ್ಮ ಜವಾಬ್ದಾರಿ ಎಂದು ಹೇಳಿರುವ ಖನ್ನಾ, ಹಣಕ್ಕಿಂತ ಮೌಲ್ಯಗಳು ಮುಖ್ಯವೆಂದು ತಿಳಿಸುತ್ತಾ, ರಣವೀರ್ ಅವರನ್ನು ವಿಲನ್ ಪಾತ್ರಕ್ಕೆ ಪರಿಗಣಿಸಬಹುದೆಂದು ಸೂಚಿಸಿದ್ದಾರೆ.